ಯಾವಾಗಲೂ ಸಂತೋಷವಾಗಿ ಇರಿ, ಅದು ಆಯ್ಕೆಯಲ್ಲ, ಸಹಜ ಸ್ಥಿತಿ “ ಎನ್ನುವರು. ಆದರೆ ನಿಜಕ್ಕೂ ಹಾಗೆ ಇರಲು ಆಗುವುದೇ?!

♦ಯಾವಾಗಲೂ ಸಂತೋಷವಾಗಿ ಇರಿ, ಅದು ಆಯ್ಕೆಯಲ್ಲ, ಸಹಜ ಸ್ಥಿತಿ “ ಎನ್ನುವರು. ಆದರೆ ನಿಜಕ್ಕೂ ಹಾಗೆ ಇರಲು ಆಗುವುದೇ?!

👉🏼ಶಬ್ದ ಗಳ ಹೆಣೆದು, ಗಡ್ಡ ಬಿಟ್ಟುಕೊಂಡು ಉದ್ದುದ್ದ ಭಾಷಣ ಮಾಡುವರು ಸೊಗಸಾಗಿ ಮರುಳು ಮಾಡುವರು ! ಜಾಗ್ರತೆ, ಜಿಜ್ಞಾಸೆ ನಿಮ್ಮಲ್ಲಿ ಇದ್ದರೆ ಒಳ್ಳೆಯದು.

ನಿಮ್ಮ ಪ್ರಶ್ನೆ ತುಂಬಾ ಪ್ರಾಮಾಣಿಕ, ಹಾಗಿರಲಾಗುವುದೇ?! 

ನಾನೂ ಹೇಳುವೆ, ಯಾವಾಗಲೂ ಸಂತೋಷವಾಗಿ ಇರಲು – ಆಗದು. ಮತ್ತು ಈ ಸಮಾಜವನ್ನು ನೋಡಿದರೆ, ಸಂತೋಷಿಸಲಿಕ್ಕೆ ಬಹಳ ತಿಣುಕಾಡ ಬೇಕಾಗುತ್ತೆ…! ಮತ್ತು ಹಾಗೆ ತಿಣುಕಾಡಿ, ಕಾಡಿ ಬೇಡಿ ಸಂತೋಷ ಪಡುವುದು ಮೋಸವಷ್ಟೇ.
ಸಹನೆ, ಪ್ರೇಮ, ಕ್ಷಮೆ – ಇದರ ಅಭ್ಯಾಸ ನಮಗೆ ಸಂತೋಷ ಕೊಡುವುದು. ಅಳವಾಗಿ ಇದರ ಅಭ್ಯಾಸ ಬೇಕು. 
ಮತ್ತು, ಲೋಭ ರಾಹಿತ್ಯ, ಕರುಬು ಇಲ್ಲದೆ ಇರುವ ಮನಸು –  ಉತ್ತಮ ವ್ಯಾಯಾಮ, ರಸಪೂರ್ಣ ಸಾಹಿತ್ಯಗಳು , ಸಂಗೀತ ಕಲೆಗಳು , ಪರ್ವತ ಚಾರಣ , ಸಜ್ಜನರ ಸಂಗ – ಸೇವೆ ^^ ಇವುಗಳಿಂದ ಸಹಜವಾಗಿ ಸಂತೋಷ ದೊರೆವುದು.
 ಅಂತರಂಗ ಉತ್ತಮತೆಗೆ ಏರದೇ ಯಾವ ಸುಖವೂ ಬಾರದು.

****.       *****

✍🏻ಹರೀಶ್ ಕಾಶ್ಯಪ🌷

Advertisements