ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಲವೇ!!

GURU1 220 GLOSSY 1 P

ತಬ್ಬಿದನು ಗುರುರಾಯ ಹಬ್ಬಿದ ಮುಕುಂದನ್ನ
ತಬ್ಬಿಬ್ಭಾದೆವು ನಾವಿ ಭಕ್ತಿಯ ಕಂಡು
ಕಂಗಳಲಿ ಇಬ್ಬನಿ ಹರಿಯಿತು!!

ಅ ವೈಕುಂಠ ಶಯ್ಯನ ಆಲಿಂಗಿಸುತ್ತ ಇಲ್ಲಿ
ಭೂವೈಕುಂಠವಾಯಿತು ಗುರುರಾಯಣ ಎದೆ !
ಕಣ್ತುಂಬಿ ಕೊಂಡೆವು ನಾವು ಭಾವ ಭಕ್ತಿಯೊಳ್
ಕಣ್ಣೀರಾದೆವು ನಾವು !!

ಶ್ರೀ ಕೃಷ್ಣನ ಕೆನ್ನೆಯು ಗುರುರಾಯಣ ಕೆನ್ನೆಯು
ಮಿಳಿತಗೊಂಡ ಆ ಹರ್ಷ! ರಾಯರ
ಹೃದಯ ಭಕ್ತಿ ಪರವಶ!!

ಪೂಜೆಗೊಳ್ಳುತ ಶ್ರೀ ಕೃಷ್ಣನು ಗುರು ರಾಯರ ಕರದಲಿ
ಪರಮ ಸುಖ ಸುರಿಸಿದ ಯತಿರಾಯಗೆ !
ಹರಿವಾನದಿಂದೆದ್ದು ರಾಯರ ಕರಭುಜ
ಗಳಲೊಂದಾದನು ದೇವಕಿ ನಂದ!!

ಪರಮಾನಂದವಿದು ಗುರುರಾಯರಿಗೆ
ಚರಮ ಭಕ್ತಿಯಿದು ಯತಿಭೂಜಗೆ!
ಹರಿಯನೆತ್ತಿ ಮುದ್ದಿಸುತ ತನ್ಮಯರಾದರು
ಚಿನ್ಮಯನ ತನ್ಮಯರಾದರೀ ಗುರುರಾಯರು !!