ಕನಕದಾಸರ ವಿಶೇಷ ಕೀರ್ತನೆ – ಹರೀಶ್ ಕಶ್ಯಪ್

ಸಹಜವಿದು ಈ ನುಡಿಯು ಸಟೆಯ ಮಾತಲ್ಲ
ಮಹಿಯೊಳಗೆ ಪೇಳುವೆನು ವಿಹಿತ ವಾಕ್ಯಗಳ……..
ಶ್ರುತಿಶಾಸ್ತ್ರಗಳ ಪುರಾಣಗಳನೋದುವನೇ ಶೂದ್ರ
ಅತಿಥಿಗಳಿಗಾದರಿಸುವನೇ ಅತಿಲುಬ್ದನು
ಪ್ರತಿನಿತ್ಯ ಸಂಧಾನ ಮಾಡುವವನೇ ಪಾಪಿ
ಪತಿಯಾಜ್ಙೆಯಿಂದಿಹಳೇ ಪರಮಪಾತಕಿಯು……….
ದಾನ ಧರ್ಮಂಗಳನು ಬಿಡುವನೇ ಧರ್ಮಾತ್ಮಾ
ಮಾನಾಭಿಮಾನಿಗಳ ಹಿಡಿಯುವವನೇ ಯೋಗಿ
ಪ್ರಾಣಿ ಹಿಂಸೆಗಳನು ಮಾಡುವವನೇ ಸುಜ್ಞಾನಿ
ಜ್ಞಾನಿ ಸಜ್ಜನರನ್ನು ಕಾಡುವನೇ ಸತ್ಪುರುಷ……
ಕೆರೆ ಕಟ್ಟಿ ಹೂದೋಟಗಳ ರಚಿಸುವವನೇ ದ್ರೋಹಿ
ಗುರು ದೈವ ಹಿರಿಯನು ಬಯ್ಯುವವನೇ ನಿಷ್ಠ
*ಸಿರಿಕಾಗಿನೆಲೆಯಾದಿಕೇಶವನ* ಚರಣವನು
ನಿರುತದಲಿ ಸ್ಮರಿಸುವನೇ ಅವಿಚಾರಿ ಪುರುಷ…….